Sunday 20 February, 2011

ನಗೋದಕ್ಕೆ ಏನ್ ಕೊಡಬೇಕು?


ಇಂದಿನ ದಿನಗಳು ಎಷ್ಟು ಕೃತಕವಾಗಿ ಕಳೆದುಹೋಗ್ತಾಇವೆ, ಅಂದ್ರೆ ಮನುಷ್ಯ ನಗುವುದನ್ನೂ ಮರೆತೇ ಬಿಟ್ಟಿದ್ದಾನೆ.ಯಾವಾಗಲೂ ಏನೋ ಚಿಂತೆ,ಕೆಲಸಗಳ ಒತ್ತಡ. ನಗರ ಜೀವನವಂತೂ ಬಲು ಯಾಂತ್ರಿಕ.ನಗುವುದಕ್ಕೇ ಒಂದು ಕ್ಲಬ್ ಇದೆ. ಆದರೆ ಇಂದಿನ ದಿನಗಳಲ್ಲೂ ಇದಕ್ಕೆ ಅಪವಾದವಾಗಿ ಕೆಲವು ಮನೆಗಳಿವೆ,ಅಂದರೆ ಆಶ್ಚರ್ಯವೇ ಆಗುತ್ತೆ. ನಮ್ಮ ಮಾವ ನಮ್ಮನ್ನಗಲಿ ಎರಡು-ಮೂರು ವರ್ಷಗಳೇ ಆಗಿವೆ.ನಮ್ಮ ಅತ್ತೆ ಹಾಗೂ ಎಲ್ಲಾ ಮಕ್ಕಳು,ಸೊಸೆಯರು ಹಾಗೂ ಅಳಿಯಂದಿರು ಒಟ್ಟಿಗೆ ಆಗಿಂದಾಗ್ಗೆ ಸೇರುವುದು ಮಾಮೂಲಿ. ನನ್ನ ಪತ್ನಿಯ ಅಣ್ಣ ಶ್ರೀಕಂಠಮೂರ್ತಿ ತಹಸಿಲ್ದಾರ್ ಹುದ್ಧೆಯಲ್ಲಿದ್ದರೆ,ಅವರ ತಮ್ಮಂದಿರೆಲ್ಲಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಾಗಿದ್ದು ಎಲ್ಲರೂ ಇನ್ನೊಬ್ಬರಿಗೆ ಭಾರವಾಗದೆ ಅವರ ಪಾಡಿಗೆ ಅವರು ಜೀವನ ಸಾಗಿಸುತ್ತಿದ್ದರೂ ವರ್ಷದಲ್ಲಿ ಹತ್ತಾರು ಭಾರಿ ಎಲ್ಲರೂ ಒಟ್ಟಿಗೆ ಸೇರುವೆ ಸಂದರ್ಭಗಳಿದ್ದೇ ಇರುತ್ತವೆ.ಮೊನ್ನೆ ನನ್ನ ಪತ್ನಿಯ ತಮ್ಮ ಮೋಹನ್ ಮನೆಯಲ್ಲಿ ಬೆಂಗಳೂರಿನಲ್ಲಿ ಎಲ್ಲರೂ ಒಟ್ಟಿಗೆ ಸೇರಿದ್ದೆವು.ಅನೌಪಚಾರಿಕವಾಗಿ ಎರಡುಮೂರು ಗಂಟೆಗಳು ಹರಟೆಹೊಡೆದರೂ ಇಲ್ಲಿ ಕೆಲವು ನಿಮಿಷಗಳ ವೀಡಿಯೋ ಹಾಕಿರುವೆ. ನೋಡಿ. ನಿಮ್ಮ ಅನಿಸಿಕೆ ತಿಳಿಸಿ.

No comments:

Post a Comment