Monday 6 September, 2010

ಮದುವೆಯಾಗಿ ೬೦ ವರ್ಷಗಳ ಸವಿನೆನಪು

ಮಗಸೊಸೆ ,ಹೆಣ್ಣುಮಕ್ಕಳು ಮತ್ತು ಅಳಿಯಂದಿರೊಡನೆಳೊಡನೆ ಶ್ರೀಮತಿ ಪಾರ್ವತಮ್ಮ ಮತ್ತು ಶ್ರೀ ಶ್ರೀಕಂಠಯ್ಯನವರು


ಅದೊಂದು ಭಾವಪೂರ್ಣ ದಿನ.ಶ್ರೀಮತಿ ಪಾರ್ವತಮ್ಮ ಮತ್ತು ಶ್ರೀಕಂಠಯ್ಯನವರು ಮದುವೆಯಾಗಿ ೬೦ ವರ್ಷಗಳ ಸವಿನೆನಪುಗಳ ಸ್ಮರಿಸುವ ಸುಂದರ ಸರಳ ಸಮಾರಂಭ. ಶ್ರೀಮತಿ ಪಾರ್ವತಮ್ಮನವರು ಹುಟ್ಟಿದ್ದು ಅವರಮ್ಮನ ತವರುಮನೆಯಾದ ಹರಿಹರಪುರದಲ್ಲಿ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಸೀತು, ಪಾತು[ಪಾರ್ವತಮ್ಮ] ಮತ್ತು ಸುಬ್ರಾಮು ತಕ್ಷಣ ಆಸರೆ ಕಂಡದ್ದು ಸೋದರಮಾವನ [ನಾಗುಮಾವ] ಮನೆಯಲ್ಲಿ.ಇದೆಲ್ಲಾ ೬೦-೭೦ ವರ್ಷಗಳ ಹಿಂದಿನ ಮಾತು. ನಾಗುಮಾವ ನರಸಮ್ಮತ್ತೆ ಅವರದು ಬಲು ಬಡತನದ ಮನೆ. ಆದರೆ ಪ್ರೀತಿ ತುಂಬಿದ ಮನಸ್ಸು. ಅಷ್ಟು ಸಾಕಾಗಿತ್ತು ಅಂದಿನ ಸಂಕಷ್ಟದ ದಿನಗಳಲ್ಲಿ. ಅಂದು ನಾಲ್ಕು ದಿನ ಅಕ್ಕನ ಮಕ್ಕಳನ್ನು ಪ್ರೀತಿಯಿಂದ ಕಂಡ ನಾಗು ಮಾವನನ್ನು ಈ ಮಕ್ಕಳೆಲ್ಲಾ ಈಗಲೂ ನೆನಪು ಮಾಡಿಕೊಂಡು ಕಣ್ಣೀರಿಡುತ್ತಾರೆ. ನಾಗು ಮಾವ -ನರಸಮ್ಮತ್ತೆಯ ಭೌತಿಕ ದೇಹಗಳು ಈಗ ಇಲ್ಲ. ಅವು ಕಾಲನ ಕೈವಶವಾಗಿ ಹತ್ತು ವರ್ಷಗಳೇ ಕಳೆದಿವೆ. ಈಗ ಆ ಮನೆಯಲ್ಲಿ ನಾಗುಮಾವನ ಮಗ ಸುರೇಶನ ಕುಟುಂಬ ಇದೆ. ಅದೇ ಮನೆಯಲ್ಲಿ ಕಳೆದ ೨೯.೮.೨೦೧೦ ರಂದು ಭಾನುವಾರ ನಡೆಯಿತು ಒಂದು ಭಾವಪೂರ್ಣ ಸುಂದರ ಸಮಾರಂಭ. ಅಕ್ಷರಗಳಲ್ಲಿ ಬರೆಯುವ ಬದಲು ಅಂದಿನ ಒಂದಿಷ್ಟು ವೀಡಿಯೋ/ ಚಿತ್ರಗಳನ್ನು ನೋಡಿ. ವಿವರವಾಗಿ ಮುಂದೆ ಸಮಯವಾದಾಗ ಬರೆಯುವೆ.
ಅಂದು ಗ್ರಾಮ ದೇವತೆ ಶ್ರೀ ದುಗಾಪರಮೇಶ್ವರಿ, ಮಾಧವ ಕೃಷ್ಣ ಮತ್ತು ಪ್ರಸನ್ನ ನಂಜುಂಡೇಶ್ವರ ಸನ್ನಿಧಿಗಳಲ್ಲಿ ಅಭಿಶೇಕ ಮತ್ತು ಪೂಜೆಯಾದನಂತರ ಮನೆಯಲ್ಲಿ ನಡೆದ ಸುಂದರ ಸಮಾರಂಭದ ವೀಡಿಯೋ ಕ್ಲಿಪ್ ಗಳನ್ನು ಇಲ್ಲಿ ಪೇರಿಸುವ ಪ್ರಯತ್ನ ಮಾಡುವೆ. ಅಷ್ಟೂ ವೀಡಿಯೋ ಅಪ್ ಲೋಡ್ ಮಾಡಲು ಸಾಧ್ಯವಾಗದಿರಹುದು. ಎಷ್ಟು ಸಾಧ್ಯವೋ ಅಷ್ಟು ಪೇರಿಸುವೆ. ಇನ್ನು ಮುಂದೆ ನೋಡಿ, ನಿಮ್ಮ ಅಭಿಪ್ರಾಯಗಳನ್ನು ಮರೆಯದೆ ತಿಳಿಸಿ.
-ಹರಿಹರಪುರಶ್ರೀಧರ್


ಪುಷ್ಪಾಲಂಕೃತ ಶ್ರೀ ದುರ್ಗಾ ಪರಮೇಶ್ವರಿ ದೇವಿ





ಮಾಧವ ಕೃಷ್ಣ




ವೇ.ಬ್ರ.ಶ್ರೀ ಕೃಷ್ಣಮೂರ್ತಿಗಳೊಡನೆ ಶ್ರೀಕಂಠಯ್ಯನವರು





ಪ್ರಸನ್ನ ನಂಜುಂಡೇಶ್ವರ ಮತ್ತು ಶಂಕರಾಚಾರ್ಯರ ಸನ್ನಿಧಿ



ಪ್ರಸನ್ನ ನಂಜುಂಡೇಶ್ವರ ದೇವಾಲಯದಲ್ಲಿ



ಮುದ್ದಾದ ಕೃಷ್ಣನ ಮೂರ್ತಿ



ಅಮ್ಮನೊಡನೆ ಮಂಜು



ಹಾಡು- ಶೃಂಗಪುರಾಧೀಶ್ವರೀ ಶಾರದೆ ಗಾಯಕಿ- ಶ್ರೀಮತಿ ಲಲಿತಾರಮೇಶ್