ರಾಮನಾಮ ಸ್ಮರಣ
ಎನಗೂ ಆಣೆ ರಂಗ ನಿನಗೂ ಆಣೆ
ಕರ್ನಾಟಕದ ಶ್ರೀ ರಾಮಕೃಷ್ಣ ಮಿಷನ್ನಿನ ಯತಿಗಳಲ್ಲಿ ಪೂಜ್ಯ ಪುರುಷೋತ್ತಮಾನಂದರು ವಿಶಿಷ್ಟ ವ್ಯಕ್ತಿತ್ವವನ್ನು ಪಡೆದಿದ್ದ ಯತಿಗಳು. ಪೂಜ್ಯರ ವ್ಯಕ್ತಿತ್ವ ಹಾಗೂ ಆದರ್ಶಗಳಿಗೆ ಮನಸೋತು ನೂರಾರು ಜನ ಯುವಕ ಯುವತಿಯರು ರಾಮಕೃಷ್ಣ- ವಿವೇಕಾನಂದರ ವಿಚಾರಧಾರೆಗೆ ತಮ್ಮನ್ನು ಅರ್ಪಿಸಿಕೊಂಡು ಕರ್ನಾಟಕದಲ್ಲಿ ರಾಮಕೃಷ್ಣ-ವಿವೇಕಾನಂದಾಶ್ರಮಗಳು, ಶಾರದಾ ಆಶ್ರಮ, ಭವತಾರಣಿಆಶ್ರಮ ಇತ್ಯಾದಿ ಹೆಸರುಗಳಲ್ಲಿ ರಾಮಕೃಷ್ಣರ-ವಿವೇಕಾನಂದರ ವಿಚಾರಧಾರೆಯ ಪ್ರಚಾರವನ್ನು ಮಾಡುತ್ತಾ ಇರುವುದನ್ನು ನಾವು ನೋಡಬಹುದಾಗಿದೆ.ಇಂತಹ ಯತಿಗಳಲ್ಲಿ ಗದಗ್ ರಾಮಕೃಷ್ಣಾಶ್ರಮದ ಶ್ರೀ ನಿರ್ಭಯಾನಂದ ಸರಸ್ವತಿ, ತುಮಕೂರು ರಾಮಕೃಷ್ಣ-ವಿವೇಕಾನಂದಾಶ್ರಮದ ಶ್ರೀ ವೀರೇಶಾನಂದರು, ಬೆಂಗಳೂರುಭವತಾರಿಣಿ ಆಶ್ರಮದ ಮಾತಾಜಿ ವಿವೇಕಮಯೀ -ಇವರುಗಳನ್ನು ಉಧಾಹರಿಸಬಹುದು. ಒಂದೆರಡು ದಿನಗಳ ಹಿಂದೆ ಬೆಂಗಳೂರಿನ ಭವತಾರಿಣಿ ಆಶ್ರಮಕ್ಕೆ ಭೇಟಿ ಕೊಟ್ಟಿದ್ದೆ. ಮಾತಾಜಿವಿವೇಕಮಯಿಯವರಿಂದ ಪುರುಷೋತ್ತಮಾನಂದರ ಉಪನ್ಯಾಸಗಳ, ಸತ್ಸಂಗದಲ್ಲಿ ನಡೆದ ಪ್ರಶ್ನೋತ್ತರಗಳ, ಅವರ ಕಂಠದಿಂದಹಾಡಿರುವ ಭಜನೆಗಳ ಆಡಿಯೋ ಲಭ್ಯವಾಯ್ತು. ಇಂದಿನಿಂದ ವಿವೇಕವಾಣಿ ಹೆಸರಿನಲ್ಲಿ ಕೆಲವು ಆಡಿಯೋ ಕ್ಲಿಪ್ ಗಳನ್ನುಪ್ರಕಟಿಸಲಾಗುವುದು. ಪುರುಷೋತ್ತಮಾನಂದರ ಸರಳ ಮಾತುಗಳು ನಮ್ಮ ಜೀವನಕ್ಕೆ ಒಂದು ಒಳ್ಳೆಯ ದಿಕ್ಕು ತೋರಿಸುವುದರಲ್ಲಿಸಂದೇಹವಿಲ್ಲ. ನಿಮ್ಮ ಅನಿಸಿಕೆಗಳು/ಸಂದೇಹಗಳನ್ನು ತಿಳಿಸಿದರೆ ಅಗತ್ಯವಾದಲ್ಲಿ ಮಾತಾಜಿ ವಿವೇಕಮಯೀ ಯವರನ್ನು ಸಂಪರ್ಕಿಸಿಉತ್ತರ ಪಡೆಯಲು ಪ್ರಯತ್ನಿಸಲಾಗುವುದು.
--------------------------------------------------
ಸ್ವಾಮಿ ಪುರುಶೋತ್ತಮಾನಂದರೊಡನೆ ಪ್ರಶ್ನೋತ್ತರ
ಸನ್ಯಾಸಿಯ ಗೀತೆ
|